ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ವಿದ್ಯಾರ್ಥಿಗಳಿಗೆ ವರದಾನವಾಗಿರುವ ಆಧುನಿಕ ತಂತ್ರಜ್ಞಾನ - ರಚನಾತ್ಮಕ ರೀತಿಯಲ್ಲಿ ಉಪಯೋಗಿಸಿಕೊಳ್ಳಲು ಎಸ್.ಎಮ್. ಸೈಯದ್ ಖಲೀಲುರ್ರಹ್ಮಾನ್

ಭಟ್ಕಳ: ವಿದ್ಯಾರ್ಥಿಗಳಿಗೆ ವರದಾನವಾಗಿರುವ ಆಧುನಿಕ ತಂತ್ರಜ್ಞಾನ - ರಚನಾತ್ಮಕ ರೀತಿಯಲ್ಲಿ ಉಪಯೋಗಿಸಿಕೊಳ್ಳಲು ಎಸ್.ಎಮ್. ಸೈಯದ್ ಖಲೀಲುರ್ರಹ್ಮಾನ್

Wed, 30 Dec 2009 03:21:00  Office Staff   S.O. News Service
ಭಟ್ಕಳ, ಡಿಸೆಂಬರ್ ೨೯: ಆಧುನಿಕ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಇಂದು ಶಿಕ್ಷಣದ ಪರಿಕಲ್ಪನೆ ಬದಲಾಗಿದೆ. ಹತ್ತು ವರ್ಷಗಳ ಹಿಂದೆ ಇದ್ದ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ತುಂಬಾ ವ್ಯತ್ಯಾಸವನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ಇಂದು ಪುಸ್ತಕದ ಹೊರೆ ಕಡಿಯಾಗಿದೆ ಎಂದು ಅಂಜುiನ್ ಹಾಮಿಯೆ ಮುಸ್ಲಿಮೀನ ಅಧ್ಯಕ್ಷ ಎಸ್.ಎಮ್. ಸೈಯ್ಯದ್ ಖಲೀಲುರ್ರಹ್ಮಾನ್ ಹೀಳಿದರು. 
ಅವರು ಸೋಮುವಾರದಂದು ಇಸ್ಲಾಮಿಯ ಆಂಗ್ಲೋ ಉರ್ದು ಹಾಗೂ ಅಂಜುiನ್ ಬಾಲಕರ ಪ್ರೌಢಶಾಲೆಯ ವಾರ್ಷೀಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಮೂಬೈಲ್ ಹಾಗೂ ಕಂಪ್ಯೂಟರ್ ಗಳಲ್ಲಿ ತಂತ್ರಾಂಶಗಳನ್ನು ಬಳಸಿ ನೂರಾರು ಪುಸ್ತಕಗಳನ್ನು ಅಂತರಜಾಲದಿಂದ ಡೌನಲೋಡ್ ಮಾಡಿಕೊಳ್ಳಬಹುದಾಗಿದೆ. ಜಗತ್ತಿನ ಯಾವುದೇ ಮೂಲೆಯಲ್ಲಿನ ಜ್ಞಾನವನ್ನು ಕ್ಷಣಾರ್ಧದಲ್ಲೆ ಪಡೆಯುವ ಸೌಲಭ್ಯ ಇಂದಿನ ವಿದ್ಯಾರ್ಥಿಗಳಿಗೆ ಒದಗಿಬಂದಿದೆ. ಒಂದು ಪುಸ್ತಕಕ್ಕಾಗಿ ಹಲವಾರು ತಿಂಗಳು ಕಾಯುವಂತಹ ಕಾಲವೊಂದಿತ್ತು ಅದರಿಂದ ಜ್ಞಾನವನ್ನು ಗಳಿಸುವುದು ಕಷ್ಟವಾಗಿತ್ತು. ಇದು ಜ್ಞಾನದ ಯುಗ ಬೆರಳ ತುದಿಯಲ್ಲೆ ಜಗತ್ತಿನ ಜ್ಞಾನವನ್ನು ಪಡೆಯಬಹುದಾಗಿದ್ದು ಇದನ್ನು ರಚನಾತ್ಮ ಮಾರ್ಗದಲ್ಲಿ ಉಪಯೋಗಿಸಿಕೊಳ್ಳಬೇಕೆಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 
 
 

 29-bkl-02.jpg
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಸಮಾಜಶಾಸ್ತ್ರ ವಿಭಾಗದ  ಮುಖ್ಯಸ್ಥ ಡಾ. ಶೌಖತ್ ಅಝೀಮ್ ಮಾತನಾಡಿ ಮುಸ್ಲಿಮರು ಈ ದೇಶದಲ್ಲಿ ಎರಡನೆ ಅತಿದೊಡ್ಡ ಸಮುದಾಯವಾಗಿದ್ದು ದೂರದೃಷ್ಟವಶಾತ್ ಅದು ಶಿಕ್ಷಣದಲ್ಲಿ ಬಹಳ ಹಿಂದುಳಿದಿದೆ, ಬ್ರಾಹ್ಮಣರು ಶೇ೨% ರಷ್ಟಿದ್ದು ಆದರೂ ಅವರು ಪ್ರತಿಯೊಂದು ಕ್ಷೇತ್ರದಲ್ಲಿ ಮುಂದುವರಿದಿದ್ದಾರೆ. ನಾವು ಶಿಕ್ಷಣ ಕ್ಷೇತ್ರವನ್ನು ಮರೆತು ಕುಳಿತಿದ್ದೇ. ಅಂಜಮನ್ ಸಂಸ್ಥೆಯು ಶಿಕ್ಷಣಕ್ಕಾಗಿ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಈ ಸಂದರ್ಭದಲ್ಲಿ ಮಿಸ್ರ್ ನ ಜಾಮಿ‌ಅ ಅಝ್ಹರ್ ವಿಶ್ವವಿದ್ಯಾಲಯದ ಪ್ರಾದ್ಯಾಪಕ ಮೌಲಾನ ಅಬ್ದುಲ್ ವಹೀದ್ ಅಝ್ಹರಿ ನದ್ವಿ ವಿದ್ಯಾರ್ಥಿಗಳಿಗೆ ಹಿತವಚನವನ್ನು ನೀಡಿದರು. 
 
ಇಸ್ಲಾಮಿಯ ಅಂಗ್ಲೋ ಉರ್ದು ಪ್ರೌಢಶಾಲೆಯ ಮುಖ್ಯಾಧ್ಯಾಪಕ ಶಬ್ಬಿರ್ ಆಹ್ಮದ್ ದಫೆದಾರ್ ಹಾಗೂ ಅಂಜುಮನ್ ಬಾಲಕರ ಪ್ರೌಢಶಾಲೆಯ ಮುಖ್ಯಧ್ಯಾಪಕ ಮುಹಿದ್ದೀನ್ ಖತ್ತಾಲಿ ವಾರ್ಷಿಕವರದಿಯನ್ನು ವಾಚಿಸಿದರು. ಅಂಜುಮನ್ ಹೈಸ್ಕೂಲ್ ಬೋರ್ಡ ಕಾರ್ಯದರ್ಶಿ ಎಸ್.ಎಮ್.  ಸೈಯದ್ ಅಬ್ದುಲ್ ಅಝೀಮ್ ಸ್ವಾಗತಿಸಿದರು. ನವಾಯತ್ ಕಾಲೋನಿ ಶಾಖೆಯ ಮುಖ್ಯಾಧ್ಯಾಪಕ ನಝೀರ್ ಆಹ್ಮದ್ ಅತಿಥಿಗಳನ್ನು ಪರಿಚಯಿಸಿದರು. 
 
ಕ್ಷೇತ್ರಶಿಕ್ಷಣಾಧಿಕಾರಿ ದೇವಿದಾಸ್ ಎಮ್. ಮೊಗೇರ್, ಅಂಜುಮನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜುಕಾಕೋ ಅಬ್ದುಲ್ ರಹೀಮ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
ಈ ಸಂದರ್ಭದಲ್ಲಿ  ವಖಾರೆ ಇಸ್ಲಾಮಿಯ ಪ್ರಶಸ್ತಿಯನ್ನು ಇಸ್ಲಾಮಿಯ ಆಂಗ್ಲೋ ಉರ್ದು ಪ್ರೌಢಶಾಲೆ ಹತ್ತನೆ ತರಗತಿಯ ವಿದ್ಯಾರ್ಥಿ ಮುಹಮ್ಮದ್ ಮಾಝ್ ದಾಮ್ದಾ ಹಾಗೂ ವಖಾರೆ ಅಂಜುiನ್ ಪ್ರಶಸ್ತಿಯನ್ನು ಅಂಜುಮನ್ ಬಾಲಕರ ಪೌಢಶಾಲೆಯ ಹತ್ತನೆಯ ತರಗತಿಯ ವಿದ್ಯಾರ್ಥಿ ಮುಹಮ್ಮದ್ ಮಾಷ ಚೆನ್ನಾ ವಿದ್ಯಾರ್ಥಿಗಳಿಗೆ ಬಂಗಾರದ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ಪ್ರದಾನ ಮಾಡಲಾಯಿತು. ಅಲ್ಲದೆ ಶಾಲಾ ಕ್ರಿಡಾಕೂಟದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.
  

ಚಿತ್ರ, ವರದಿ: ಎಮ್ಮಾರ್ ಮಾನ್ವಿ, ಭಟ್ಕಳ

Share: